ಸಹಕಾರ ಭಾರತಿಯು ಒಂದು ಅಗ್ರಗಣ್ಯ ಸಹಕಾರಿ ಸಂಸ್ಥೆಯಾಗಿದ್ದು, ದೇಶದಾದ್ಯಂತ ಸಹಕಾರ ಚಳುವಳಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.
೧೯೭೮ರಲ್ಲಿ ಸ್ಥಾಪಿತವಾದ ಈ ಸಂಸ್ಥೆ, ಸಹಕಾರದ ಮೂಲಕ ಸಮಾಜದ ಸರ್ವಾಂಗೀಣ ವಿಕಾಸವನ್ನು ಸಾಧಿಸಲು ಬದ್ಧವಾಗಿದೆ. ಸಹಕಾರಿ ಚಳುವಳಿಯನ್ನು ಜನಪ್ರಿಯಗೊಳಿಸುವುದು, ಸಹಕಾರಿ ಸಂಸ್ಥೆಗಳನ್ನು ಬಲಪಡಿಸುವುದು ಮತ್ತು ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವುದು ನಮ್ಮ ಧ್ಯೇಯವಾಗಿದೆ.
ನಾವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿವಿಧ ಯೋಜನೆಗಳನ್ನು ಕೈಗೊಂಡಿದ್ದೇವೆ. ಕೃಷಿ, ವಿವಿಧೋದ್ಯಮ, ಗೃಹನಿರ್ಮಾಣ, ವಿಮಾ, ಕೈಮಗ್ಗ ಮತ್ತು ಹಿತರಕ್ಷಣಾ ಸಹಕಾರಿ ಸಂಘಟನೆಗಳನ್ನು ಪ್ರೋತ್ಸಾಹಿಸುತ್ತೇವೆ.
"ಸಹಕಾರದ ಮೂಲಕ ಸಮೃದ್ಧ ಭಾರತ ನಿರ್ಮಾಣ" - ಪ್ರತಿ ಭಾರತೀಯರು ಸಮೃದ್ಧ ಜೀವನವನ್ನು ನಡೆಸುವಂತೆ ಮಾಡುವುದು ನಮ್ಮ ಧ್ಯೇಯ.
1975ರ ಜೂನ್ ತಿಂಗಳಿನಲ್ಲಿ ಅಂದಿನ ಕೇಂದ್ರ ಸರಕಾರ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿತು. ಮಧ್ಯರಾತ್ರಿಯಿಂದಲೇ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಮೊಟಕುಗೊಳಿಸಲಾಯಿತು.
ಸುಮಾರು 28 ಸುದೀರ್ಘ ವರ್ಷಗಳ ವಿಶ್ವಮಾದರಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೋಲೆಯಾಯಿತು. ವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಬಂಧಿಸಲಾಯಿತು. ವಿರೋಧಿಸಿದ ಅನೇಕ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳನ್ನು ದೇಶವ್ಯಾಪಿ ನಿಷೇಧಿಸಲಾಯಿತು.
ಈ ಹಿನ್ನೆಲೆಯಲ್ಲಿ 'ಬಿನಾ ಸಂಸ್ಕಾರ್ ನಹೀ ಸಹಕಾರ್, ಬಿನಾ ಸಹಕಾರ್ ನಹೀ ಉದ್ದಾರ್' ಎನ್ನುವ ಮೂಲಮಂತ್ರವನ್ನು ಘೋಷ ವಾಕ್ಯವನ್ನಾಗಿಟ್ಟುಕೊಂಡು ಮಹಾರಾಷ್ಟ್ರದ ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಮಾನನೀಯ ಶ್ರೀ ಲಕ್ಷ್ಮಣ್ ರಾವ್ ಇನಾಂದಾರರವರ ಮಾರ್ಗದರ್ಶನದಲ್ಲಿ ಮಾನನೀಯ ಶ್ರೀ ಮಾಧವ್ ರಾವ್ ಗೋಡೋಳೆಯವರ ನೇತೃತ್ವದಲ್ಲಿ 1978 ಸೆಪ್ಟೆಂಬರ್ 15, ಅನಂತ ಚತುರ್ದಶಿಯ ಸಮರ್ಪಣಾಭಾವದಿಂದ ಪುಣ್ಯದಿನದಂದು ಸಹಕಾರ ಭಾರತಿಯು ಪೂನಾದಲ್ಲಿ ಜನ್ಮ ತಾಳಿತು.
ಅಂದಿನಿಂದ ಸಹಕಾರ ಸಂಘಗಳು, ಸಂಘಗಳ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ ಮತ್ತು ಸಹಕಾರಿ ಸದಸ್ಯರನ್ನು ಸಂಘಟಿಸಿಕೊಂಡು ಅವರಲ್ಲಿ ರಾಷ್ಟ್ರೀಯ ಚಿಂತನೆಯೊಂದಿಗೆ ಸಾಮಾಜಿಕ ಜವಾಬ್ದಾರಿಯ ತಿಳುವಳಿಕೆಯನ್ನು ಮೂಡಿಸುವ ಕೆಲಸವನ್ನು ಸಹಕಾರ ಭಾರತಿಯು ಮಾಡುತ್ತಿದೆ.
ಮೊದಲನೆಯದಾಗಿ ದೇಶದ ಸಾಮಾನ್ಯ ಜನರ ಅಂದರೆ ಸದಸ್ಯರಿಂದ ನಿಯಂತ್ರಿಸಲ್ಪಡುವ ಸಹಕಾರ ಸಂಘಗಳ ಮೂಲಕ ಆರ್ಥಿಕ ಚಟುವಟಿಕೆ ಆರಂಭಿಸುವುದು. ಅದರಿಂದ ಬಲಿಷ್ಠ ಆರ್ಥಿಕ ಕ್ಷಮತೆಯುಳ್ಳ ಸಹಕಾರ ಸಂಘಗಳ ಸ್ಥಾಪನೆ ಸಾಧ್ಯವಾಗುತ್ತದೆ. ತನ್ಮೂಲಕ ದೇಶದ ಸರ್ವತೋಮುಖ ಪುನರುತ್ಥಾನ ಸಾಧ್ಯ ಎನ್ನುವ ರಚನಾತ್ಮಕ ದೃಷ್ಟಿಕೋನ ಸಹಕಾರ ಭಾರತಿಯದು.
ಸಹಕಾರ ಅಭಿವೃದ್ಧಿಯ ಮೂಲಕ ದೇಶದ ಆರ್ಥಿಕ ಉತ್ಥಾನ, ಆರ್ಥಿಕವಾಗಿ ದುರ್ಬಲರಾಗಿರುವ ನಾಗರಿಕರಿಗೆ ಸಾಂತ್ವನ, ಆರ್ಥಿಕ ಕ್ಷಮತೆಯುಳ್ಳ ಸಹಕಾರಿ ಸಂಸ್ಥೆಗಳ ರಚನೆ ಮತ್ತು ಸುಯೋಗ್ಯ ಸಂಸ್ಕಾರಯುತ ಕಾರ್ಯಕರ್ತರ ಸಂಘಟನೆ ಹಾಗೂ ಸಹಕಾರಿಗಳಲ್ಲಿ ರಾಷ್ಟ್ರೀಯತೆ ಮತ್ತು ಸಾಮಾಜಿಕ ಜವಾಬ್ದಾರಿಗಳ ತಿಳುವಳಿಕೆಯನ್ನು ಮೂಡಿಸುವಂತಹ ಸ್ಪಷ್ಟ ಗುರಿ ಸಹಕಾರ ಭಾರತಿಯದು.
ಸಹಕಾರಿ ಸಂಘಟನೆಗಳನ್ನು ಸಂಘಟಿಸುವುದು, ತರಬೇತಿ ಹಾಗೂ ಸದಸ್ಯರ ಸಾಮರ್ಥ್ಯವರ್ಧನೆ.
ಕೃಷಿ, ಗೃಹನಿರ್ಮಾಣ, ಉದ್ಯಮ, ಕೈಮಗ್ಗ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ.
ಸಹಕಾರಿ ಹಕ್ಕುಗಳಿಗಾಗಿ ಚಳುವಳಿ, ಹೋರಾಟ ಮತ್ತು ಸದಸ್ಯರ ಹಿತಾಸಕ್ತಿಗಳ ರಕ್ಷಣೆ.
ಸರ್ಕಾರ ಮತ್ತು ಸಂಸ್ಥೆಗಳ ಮುಂದೆ ಸಹಕಾರಿ ಕ್ಷೇತ್ರದ ಪ್ರತಿನಿಧಿಯಾಗಿ ನಿಲ್ಲುವುದು.
ಸಹಕಾರ ಭಾರತಿಯು ಅನುಸರಿಸುತ್ತಿರುವ ಮೂಲಭೂತ ತತ್ವಗಳು